kalika chetarike cluster share meeting-ಕಲಿಕಾ ಚೇತರಿಕೆ ಸಮಾಲೋಚನಾ ಸಭೆ-೪
kalika chetarike cluster share meeting-ಕಲಿಕಾ ಚೇತರಿಕೆ ಸಮಾಲೋಚನಾ ಸಭೆ-೪ ದಿನಾಂಕ ೨೨ otober 2022ರ ಶನಿವಾರ ಬೆಳಿಗ್ಗೆ 10:30 ಕ್ಕೆ ಕ್ಲಸ್ಟರ್ ಹಂತದ ಕಲಿಕಾ ಚೇತರಿಕೆ ಸಮಾಲೋಚನಾ ಸಭೆಯನ್ನು kalika chetarike cluster share meeting ಹಮ್ಮಿಕೊಳ್ಳಲಾಗಿತ್ತು ಈ ಸಭೆಗೆ ನಮ್ಮ ಕ್ಲಸ್ಟರ್ನ ಕೋರ್ ವಿಷಯಗಳನ್ನು ಬೋಧನೆ ಮಾಡುವ ಶೇಕಡ 50ರಷ್ಟು ಶಿಕ್ಷಕರು ಹಾಜರಾಗಿದ್ದರು. ನಮ್ಮ ಕ್ಲಸ್ಟರ್ನ ಜೊತೆಗೆ ಬೇಲೂರು ಕ್ಲಸ್ಟರ್ನ ಶಿಕ್ಷಕರು ಕೂಡ ಈ ಒಂದು ಸಮಾಲೋಚನಾ ಸಭೆಗೆ ಹಾಜರಾಗಿದ್ದರು. ಸಮಲೋಚನಾ ಸಭೆಯನ್ನು ಎಲ್ಲರನ್ನೂ ಸ್ವಾಗತಿಸುವುದರ ಮುಖಾಂತರ ಬೇಲೂರು ಕ್ಲಸ್ಟರ್ನ ಸಿಆರ್ಪಿಗಳಾಗಿರುವ ಶ್ರೀಮತಿ ವಿಜಯ ರವರು ಪ್ರಾರಂಭಿಸಿದರು.ನಂತರ ಶ್ರೀಯುತ ಶಿವಪ್ಪನವರು ಇಸಿಒ ಬೇಲೂರು ಇವರು ಶಾಲವಾರು ಕಲಿಕಾ ಚೇತರಿಕೆ ಉಪಕ್ರಮದ ಅನುಷ್ಠಾನದ ಕುರಿತು ಪ್ರತಿ ಶಾಲೆಗಳಿಂದ ಮಾಹಿತಿ ಪಡೆದರು ಶಿಕ್ಷಕರೊಂದಿಗೆ ಚರ್ಚೆ ಮುಖಾಂತರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು. ಶಾಲಾ ಹಂತದಲ್ಲಿ ಸಭೆಗಳ ಆಯೋಜನೆ ನಡೆಸಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಇಲಾಖೆಯ ವತಿಯಿಂದ ವಿತರಿಸಿರುವ ಚಟುವಟಿಕೆ ಪುಸ್ತಕಗಳು ಕಲಿಕಾ ಹಾಡಿಗಳ ಬಗ್ಗೆ ಅವುಗಳ ಬಳಕೆ ಮಾಡುತ್ತಿರುವ ಬಗ್ಗೆ ಜಾಗೃತಿ ಮೂಡಿಸುವುದು ಜೊತೆಗೆ ಇದರ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸುವುದು ಈ ಸಭೆಗೆ ಎಸ್ಡಿಎಂಸಿ ಅವರು ಶಾಲಾ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು ಶಿಕ್ಷಣ ಸಕ್ತರನ್ನು ಆಹ್ವಾನಿಸಿ ಅರಿವು ಮೂಡಿಸುವಂತೆ ಸಲಹೆ ನೀಡಿದರು ಮುಖ್ಯ ಶಿಕ್ಷಕರು ನಿಯಮಿತವಾಗಿ ಸಹಶಿಕ್ಷಕರ ಸಭೆಯ ಸಭೆ ನಡೆಸಿ ಸದರಿ ಕಾರ್ಯಕ್ರಮದ ಬಗ್ಗೆ ಸಮಲೋಚಿಸಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು ಶಿಕ್ಷಕರು ನಿರ್ವಹಿಸಬೇಕಾದ ದಾಖಲೆಗಳಾಗಿರತಕ್ಕಂತಹ ದಿನಚರಿ ಕಲಿಕಾ ಫಲಗಳ ಹಂಚಿಕೆ ವೈಯಕ್ತಿಕ ಕ್ರೂಡಿಕೃತ ಅಂಕವಹಿಗಳು ಕಲಿಕಾ ಫಲಗಳ ಪ್ರಗತಿ ನೋಟ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ನರಸಿಂಹಮೂರ್ತಿ ಜೆಪಿ ಸಿಆರ್ಪಿ ಸಿಆರ್ಸಿ ಕಾಚಹಳ್ಳಿ ವಿದ್ಯಾ ಪ್ರವೇಶ ಒಂದನೇ ತರಗತಿಯಿಂದ ಮೂರನೇ ತರಗತಿ ವರೆಗೆ ಆಗಸ್ಟ್ 31ಕ್ಕೆ ಅಂತ್ಯವಾಗಿರುತ್ತದೆ ಸೆಪ್ಟೆಂಬರ್ ಒಂದರಿಂದ ಕಲಿಕಾ ಚೇತರಿಕೆಯನ್ನು ನಲಿ ಕಲಿ ತರಗತಿಗಳಿಗೆ ಅನುಷ್ಠಾನ ಮಾಡಬೇಕಾಗಿರುತ್ತದೆ ಅನುಷ್ಠಾನ ಮಾಡಬೇಕಾದರೆ ಗಮನಿಸಬೇಕಾದ ಪ್ರಮುಖ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು ಇಲ್ಲಿ ಶಿಕ್ಷಕರಿಗೆ ಎದುರಾದ ಗೊಂದಲಗಳ ಬಗ್ಗೆ ಪ್ರಶ್ನೆಗಳಿಗೆ ಪರಿಹಾರ ನೀಡಲಾಯಿತು. ಕಲಿಕಾ ಚೇತರಿಕೆ ಯಶೋಗಾಥೆಗಳ ರಚನೆಯನ್ನು ಮಾಡಿ ಸದರಿಸಿ ಆರ್ ಪಿ ಗಳಿಗೆ ನೀಡುವಂತೆ ಸಲಹೆ ನೀಡಲಾಯಿತು.
ನಂತರ ಇವರು ಗಣಿತ ಪರಿಸರ ಅಧ್ಯಯನ ವಿಜ್ಞಾನ ವಿಷಯಗಳ ಕುರಿತು ಆ ವಿಷಯಗಳಲ್ಲಿ ಬರುವ ಕಲಿಕಾ ಫಲಗಳ ಕಠಿಣವಾದ ಮಾಹಿತಿಗಳ ಬಗ್ಗೆ ಚರ್ಚಿಸಿದರು ಶಿಕ್ಷಕರು ಕಠಿಣವಾದ ಕಲಿಕಾ ಫಲಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಿದರು.
ಆರುಮತ್ತು ಏಳನೇ ತರಗತಿ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿನ ಕಠಿಣ ಕಲಿಕಾ ಫಲಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು ರೂಪಣಾತ್ಮಕ ಮೌಲ್ಯಮಾಪನ ಒಂದು ರೂಪಣಾತ್ಮಕ ಮೌಲ್ಯಮಾಪನ ಎರಡು ಸಂಕಲನಾತ್ಮಕ ಮೌಲ್ಯಮಾಪನ ಒಂದನ್ನು ನಡೆಸುವಾಗ ವೈಯಕ್ತಿಕ ಕ್ರೋಡಿಕೃತ ಅಂಕ ವಹಿ ನಿರ್ವಹಿಸುವ ವಿಧಾನಗಳನ್ನು ತಿಳಿಸಿದರು ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಾಗ ಲೆವೆಲ್ ಒಂದು ಮತ್ತು ಲೆವೆಲ್ ಎರಡು ವಿಧಾನಗಳಲ್ಲಿ ಯಾವ ಮಕ್ಕಳಿಗೆ ಯಾವ ರೀತಿ ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬುದರ ಬಗ್ಗೆ ಚರ್ಚಿಸಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿದರು ನಂತರ ಕೊನೆಯ ಅವಧಿಯಲ್ಲಿ ಶ್ರೀಮತಿ ವಿಜಯ, ಸಿ ಆರ್ ಪಿ ಸಿ ಆರ್ ಸಿ ಬೇಲೂರು ಇವರು ಇಲಾಖೆಯ ಇತರ ಮಾಹಿತಿಗಳ ಬಗ್ಗೆ ಮಾಹಿತಿ ನೀಡಿದರು ಮುಂದಿನ ಸಭೆಯ ಆಯೋಜನೆ ಬಗ್ಗೆ ಚರ್ಚಿಸಿ ಕಾರ್ಯಯೋಜನೆಯನ್ನು ತಯಾರಿಸಿ ಮುಖ್ಯಾಂಶಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಅವರಿಗೆ ಮಾಹಿತಿಯನ್ನು ನೀಡಲಾಯಿತು. ಹೀಗೆ ಕ್ಲಸ್ಟರ್ ಸಮಾಲೋಚನಾ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಧನ್ಯವಾದಗಳು.