Karnataka kseab annual board assessments for grades 5 and 8.
2022-23ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5ಮತ್ತು8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ ನಡೆಸುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ.Karnataka kseab annual board assessments for grades 5 and 8 full details.
2022-23ನೇ ಸಾಲಿನಿಂದ ಕರ್ನಾಟಕ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ ನಡೆಸಲು ಕಾರಣ ಮತ್ತು ಉದ್ದೇಶ?
Reasons for Karnataka kseab annual exam for grades 5 and 8.
1.ಪ್ರಸ್ತುತ 2022-23ನೇ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಕಲಿಕಾ ಪ್ರಗತಿಯು ಅನುಪಾಲನೆಯಲ್ಲಿದೆ. ಆದರೆ ಪ್ರಸ್ತುತ 1ನೇ ತರಗತಿಯಿಂದ 9ನೇ ತರಗತಿವರೆಗೆ ಶಾಲಾ ಹಂತದಲ್ಲಿ ಸಿಸಿಇ ಅಡಿ ಮೌಲ್ಯಾಂಕನ ವಿಶ್ಲೇಷಣೆ ಮಾಡುತ್ತಿರುವುದರಿಂದ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ನಿರ್ವಹಿಸುತ್ತಿಲ್ಲವಾದ್ದರಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು, ಕಲಕಾ-ಫಲಗಳನ್ನು/ ಸಾಮರ್ಥ್ಯ-ಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವುದು ಅವಶ್ಯವಿರುವುದರಿಂದ Karnataka kseab annual board assessments for grades 5 and 8 ವಾರ್ಷಿಕ ಪರೀಕ್ಷೆ / ಮೌಲ್ಯಾಂಕನ ನಡೆಸಲಾಗುತ್ತಿದೆ.
2.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲ [K.S.E.A.B] ಇವರ ಹಂತದಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ ಮೌಲ್ಯಾಂಕನ ವಿಶ್ಲೇಷಣೆ ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು. ಶಾಲಾವಾರು. ಕ್ಲಸ್ಟರ್/ತಾಲ್ಲೂಕುವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ [Need Based] ಕ್ರಿಯಾ ಯೋಜನೆಯನ್ನು ರಚಿಸಿ ಭೋದನಾ-ಕಲಿಕಾ ಪ್ರಕ್ರಿಯೆಯನ್ನು ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ.
3.ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ, 2009, ತಿದ್ದುಪಡಿ ಕಾಯ್ದೆ, 2019ರ ಕಲಂ 16(1) ರಿಂದ 16(4) ರಲ್ಲಿನ ಪಾಠ ಕೆಳಕಂಡಂತಿರುತ್ತದೆ.
Examination and holding back in certain cases.
2. In the Right of Children to Free and Compulsory Education Act,
2009(hereinafter referred to as the principal Act) for Section 16, the following section shall be substituted. Namely:-
"16.(1) There shall be a regular examination in the fifth and in the eighth class at the end of every academic year.
2
(2) If a child fails in examination referred to in sub-section (1). He shall be given additional instruction and granted opportunity for re-examination within a period of two months from the date of declaration of the result.
(3) The appropriate Government may allow schools to hold back a child in the fifth class or in the eighth class or both classes, in such manner and subject to conditions as may be prescribed, if he fails in the re-examination referred to in sub-section(2):
Provided that the appropriate Government may decide not to hold back a child in any class till the completion of elementary education.
(4) No child shall be expelled from a school till the completion of elementary
education".
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಅನಿಂದ 5 ಮತ್ತು 8ನೇ ತರಗತಿಗಳ ವಾರ್ಷಿಕ ಪರೀಕ್ಷೆಯನ್ನು ನಿರ್ವಹಿಸಲು ಉಲ್ಲೇಖ(2)ರಂತೆ ಸರ್ಕಾರ ಅನುಮೋದಿಸಿ, ಅನುಮತಿ ನೀಡಿರುತ್ತದೆ.
5 ಮತ್ತು 8ನೇ ತರಗತಿಗಳ ವಾರ್ಷಿಕ ಪರೀಕ್ಷೆಯ ಸುತ್ತೋಲೆಗಾಗಿ ಈ ಕೆಳಗೆ ಕ್ಲಿಕ್ ಮಾಡಿ👇
What is the syllabus for Karnataka kseab annual board assessments for grades 5 and 8?5 ಮತ್ತು 8 ನೇ ತರಗತಿಗಳಿಗೆ ಕರ್ನಾಟಕ kseab ವಾರ್ಷಿಕ ಮಂಡಳಿ ಮೌಲ್ಯಮಾಪನಗಳಿಗೆ ಪಠ್ಯಕ್ರಮ ಯಾವುದು?
ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆ ನಿರ್ವಹಿಸುವ ಬದಲಾಗಿ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಿಸಿ, ಸಾಂಕೇತಿಕವಾಗಿ ನವಂಬರ್-2022 ರಿಂದ ಮಾರ್ಚ್-2023ರ ಮೊದಲನೇ ವಾರದ ಒಳಗೆ ನಿರ್ವಹಿಸಿದ ಪಠ್ಯವಸ್ತು.
2022-23ನೇ ಸಾಲಿಗೆ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ/ಮೌಲ್ಯಾಂಕನ ನಿರ್ವಹಣಿಗೆ ಮಾರ್ಗಸೂಚಿ(karnataka kseab annual exam for classes 5 and 8)👇
1.ಪರೀಕ್ಷಾ ನೋಂದಣಿ ಪ್ರಕ್ರಿಯೆ:- (Karnataka kseab annual exam for grades 5 and 8)
- ಪ್ರತಿ ಶಾಲೆಯು SATS ಪ್ರಕಾರ ದಾಖಲಾಗಿರುವ ರಾಜ್ಯ ಪಠ್ಯಕ್ರಮದ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರು SATS ನಲ್ಲಿ ನೋಂದಾಯಿಸಿದಂತೆ ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಸುವುದು.
- ಅದರ ಆಧಾರದ ಮೇಲೆ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವುದು. ಯಾವುದೇ ವಿದ್ಯಾರ್ಥಿ SATS ನಲ್ಲಿ ಇಂದೀಕರಿಸಿರುವುದಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವುದು.
- ಸದರಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅವರ SATS ಸಂಖ್ಯೆಯನ್ನೇ ಪರೀಕ್ಷಾ ನೋಂದಣಿ ಸಂಖ್ಯೆಯನ್ನಾಗಿ ನೀಡಬಹುದಾಗಿದೆ.
- ಈ ಸಂಬಂಧ ಸಿ.ಆರ್.ಪಿ.ಗಳು ತಮ್ಮ ವ್ಯಾಪ್ತಿಯ ಎಲ್ಲಾ ಮಕ್ಕಳು ಪರೀಕ್ಷೆಗೆ ನೋಂದಣಿಯಾಗಿರುವ ಬಗ್ಗೆ ಮತ್ತು ಡೂಪ್ಲಿಕೇಷನ್ (ನಕಲು) ಆಗದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವುದು ಹಾಗೂ ಶಾಲೆಗಳಿಗೆ ಮಾಹಿತಿ ನೀಡುವುದು.
- ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಸ್ತುವಾರಿ ವಹಿಸುವುದು. ಈ ಸಂಬಂಧ SATS ವಿಭಾಗದಿಂದ ನೋಂದಣಿ ಪತ್ರದ ನಮೂನೆಯನ್ನು K.S.E.A.B ಕಛೇರಿಯ ಮಾರ್ಗದರ್ಶನದಲ್ಲಿ ಸಿದ್ದಪಡಿಸಿ, ಆಯಾ ಶಾಲಾ ಮುಖ್ಯೋಪಾಧ್ಯಾಯರು ನೋಂದಣಿ ಪತ್ರವನ್ನು ಮುದ್ರಿಸಿ, ಪಡೆಯುವಂತೆ ಸೂಚಿಸುವುದು.
- ಸದರಿ ನೋಂದಣಿಯನ್ನಾಧರಿಸಿ, ಮಗುವಿನ ಫಲಿತಾಂಶ, ಅಂಕಗಳ ಕ್ರೋಢೀಕರಣ, ಅಂಕಪಟ್ಟಿ ಮುದ್ರಣ ತದನಂತರ ನೇರವಾಗಿ SATSಗೆ ಸದರಿ SA-2 ಪರೀಕ್ಷೆಯ ಅಂಕಗಳನ್ನು (SA-2 ಪರೀಕ್ಷೆ ಅಂಕದ ಕಾಲಂನಲ್ಲಿ) ನಮೂದಿಸುವುದು.
02. ಪರೀಕ್ಷಾ ನೋಂದಣಿ ಶುಲ್ಕ:(Karnataka kseab annual exam for grades 5 and 8)
2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಭರಿಸಲಾಗುವುದು.
03. ಪರೀಕ್ಷಾ ಕೇಂದ್ರಗಳ ಸ್ಥಾಪನೆ:- (Karnataka kseab Annual Examination / Evaluation for grades 5 and 8)
5ನೇ ತರಗತಿ ಪರೀಕ್ಷಾ ಕೇಂದ್ರ-
ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ, ಶಾಲಾವಾರು ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ.ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸಮೀಪದ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳೂ ಸೇರಿದಂತೆ ಪರೀಕ್ಷಾ ಕೇಂದ್ರ ಸ್ಥಾಪನೆ.
8ನೇ ತರಗತಿ ಪರೀಕ್ಷಾ ಕೇಂದ್ರ-
8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ |ಪ್ರೌಢಶಾಲೆಗಳಲ್ಲಿ ಸ್ಥಾಪಿಸುವುದು. ಹಿರಿಯ ಪ್ರಾಥಮಿಕ / ಪ್ರೌಢ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲ ಕನಿಷ್ಠ 2. ಕಿ.ಮೀ ವ್ಯಾಪ್ತಿಯ ಸಮೀಪದ ಶಾಲೆಗಳಿಗೆ ಲಗತ್ತಿಸುವುದು.
04. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯ ನಿರ್ವಹಣೆ:-
ಪರೀಕ್ಷೆ ನಡೆಸಲು ಬೇಕಾದ ಅವಶ್ಯಕ ಮೂಲ ಸೌಕರ್ಯಗಳನ್ನು ಆಯಾ ಪರೀಕ್ಷಾ ಕೇಂದ್ರದ ಶಾಲೆಯವರು ನಿರ್ವಹಿಸುವುದು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಹಾಗೂ ಕೊಠಡಿಯ ಮೇಲ್ವಿಚಾರಕರನ್ನಾಗಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರನ್ನು ಬದಲಾಯಿಸಿ ನಿಯೋಜನೆ ಮಾಡಲಾಗುವುದು.
05. ಪ್ರವೇಶ ಪತ್ರ ಮುದ್ರಣ ಮತ್ತು ವಿತರಣೆ:-
ಎಸ್.ಎ.ಟಿ.ಎಸ್ ನಲ್ಲಿ ನೋಂದಣಿಯಾಗಿರುವ 5 ಮತ್ತು 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರು ಆನೈನ್ನಲ್ಲಿ ಮಾಹಿತಿ ಪಡೆದು ನಂತರ ಪರಿಶೀಲಿಸಿ ಪ್ರವೇಶ ಪತ್ರ ಮುದ್ರಿಸಿ ವಿತರಣೆಯನ್ನು ಮಾಡುವುದು.
06. ಪ್ರಶ್ನೆ ಪತ್ರಿಕೆ ವಿನ್ಯಾಸ:
ಪ್ರಸ್ತುತ ಸಾಲಿನಲ್ಲಿ ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವುದರಿಂದ ಹಾಗೂ ಉಳಿದ ಅರ್ಧ ವರ್ಷದಲ್ಲಿನ ಪಠ್ಯವಸ್ತುವನ್ನಾಧರಿಸಿದಂತೆ [ನವೆಂಬರ್-2022 ರಿಂದ ಮಾರ್ಚ್-2023 ರ ಮೊದಲ ವಾರದವರೆಗೆ ನಿರ್ವಹಿಸುವ ಪಠ್ಯವಸ್ತುವನ್ನಾಧರಿಸಿ ಸಂಕಲಾನತ್ಮಕ ಪರೀಕ್ಷೆ-2(SA-2) ಪರೀಕ್ಷೆಯನ್ನು 5 ಮತ್ತು 8ನೇ ತರಗತಿಗಳಿಗೆ 50 ಅಂಕಗಳಿಗೆ ನಿಗಧಿಪಡಿಸಿ ಎರಡು ಘಂಟೆ ಸಮಯ ನೀಡಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಅದರಲ್ಲಿ 40 ಅಂಕಗಳು ಅಖಿತ ಪರೀಕ್ಷೆ,
10 ಅಂಕಗಳು ಮೌಖಿಕ ಪರೀಕ್ಷೆಗಾಗಿ ವಿಂಗಡಿಸುವುದು.
40 ಅಂಕದ ಅಖಿತ ಪರೀಕ್ಷೆಯಲ್ಲಿ 20 ಅಂಕದ ಎಂ.ಸಿ.ಕ್ಯೂ ಪಶ್ನೆಗಳು (ಬಹು ಆಯ್ಕೆ ಪ್ರಶ್ನೆಗಳು) ಹಾಗೂ ಉಳಿದ 20 ಅಂಕಗಳಿಗೆ ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾಧರಿಸಿದ ಪ್ರಶ್ನೆಗಳನ್ನು ಒಳಗೊಂಡಂತೆ ಬ್ಲೂ-ಪ್ರಿಂಟ್ ತಯಾರಿಸುವುದು.
ಪ್ರಶ್ನೆ ಪತ್ರಿಕೆಯು ಕಲಿಕಾ ಚೇತರಿಕೆ ಪಠ್ಯಕ್ರಮದ ಅಡಿಯಲ್ಲಿ ತಯಾರಿಸಲು ಸರ್ಕಾರವು ಸೂಚಿಸಿದ್ದು, ಅದರಂತೆ ಕಲಿಕಾ ಚೇತರಿಕೆ ಪಠ್ಯ ಕ್ರಮವು ಪ್ರಸ್ತುತ ಪಠ್ಯವಸ್ತುವನ್ನಾಧರಿಸಿ ರೂಪಿಸಿರುವುದರಿಂದ ಪಠ್ಯ ಪುಸ್ತಕ ಮತ್ತು ಕಲಿಕಾ ಚೇತರಿಕೆಯನ್ನಾಧರಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆಯನ್ನು K.S.E.A.Bಯಿಂದ ಸಿದ್ಧಪಡಿಸಲಾಗುತ್ತದೆ.